ಕತ್ರಿನಾ ಸ್ನಾನ ಮಾಡುತ್ತಿರುವ ವಿಡಿಯೋ ನೆಟ್ ನಲ್ಲಿ ಲಭ್ಯ!

ಶನಿವಾರ, 17 ಮೇ 2014 (11:47 IST)
ಬಾಲಿವುಡ್  ನಟಿ ಕತ್ರಿನಾಳ  ಬಾತ್  ರೂಂ ವೀಡಿಯೋ ಈಗ ನೆಟ್ ನಲ್ಲಿ ಹರಿದಾಡಿ ಗಂಡು ಹೃದಯಗಳು ವಿಲವಿಲ ಅಂತ ಒದ್ದಾಡುವಂತೆ ಮಾಡಿದೆ. ಇದು ಈಗ ಬಾಲಿವುಡ್ ಹಾಟ್ ಹಾಟ್ ಸುದ್ದಿಯಾಗಿ ಕೇಳಿ ಬರುತ್ತಿದೆ. ಈ ವೀಡಿಯೋವನ್ನು ಕಂಡವವರು ಆಹಾ ಕತ್ರಿನಾ.. ನಿನ್ನ ರೂಪ ಅಂದ್ರೆ ಸುಮ್ಮನೇನಾ ಅನ್ನುವಂತೆ ಚಪ್ಪರಿಕೊಂಡು ಮಾತನಾಡುತ್ತಿದ್ದಾರಂತೆ!  ಕಳೆದ ಕೆಲವು ದಿನಗಳಿಂದ ಮೀಡಿಯಾಗಳಿಂದ ದೂರ ಇರುವ ಕಟ್ ಈಗ ಮತ್ತೆ ಮಾಧ್ಯಮಗಳನ್ನು ಸಕತ್ ರಭಸದಿಂದ ಆಕರ್ಷಿಸಿದ್ದಾಳೆ. 
 
ಈ ಬಾತ್ ರೂಂ ವೀಡಿಯೋ ಅದ್ಯಾಕೆ ಈಕೆ ನೆಟ್ ನಲ್ಲಿ ಬಿಟ್ಟಿದ್ದಾಳೆ ಎನ್ನುವ ಗಾಬರಿ ಆಗುವ ಅಗತ್ಯ ಇಲ್ಲ, ಇದು ಕಮರ್ಷಿಯಲ್ ಆಡ್ ಒಂದರ ದೃಶ್ಯ. ಇತ್ತೀಚೆಗೆ ಆಕೆ ಜಾನ್ಸನ್ ಬಾತ್ರೂಮ್ಸ್ ಗೆ ಸಂಬಂಧಪಟ್ಟ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಪ್ರಾಡಕ್ಟ್ ಗೆ ಬ್ರಾಂಡ್ ಅಂಬಾಸಿಡರ್ ಸಹ ಆಗಿದ್ದಾಳೆ ಈ ಚೆಲುವೆ. ಇಲ್ಲಿವರೆಗೂ ಈಕೆ ನಟಿಸಿರುವ ಜಾಹೀರಾತುಗಳಿಗಿಂತ ಇದು ಭಿನ್ನವಾಗಿದೆಯಂತೆ. 
 
ಈ ಜಾಹೀರಾತಲ್ಲಿ ಕತ್ರೀನ ಬ್ಲಾಕ್ ಅಂಡ್ ವೈಟ್ ಮುಖಾಂತರ ಜನರ ಮುಂದೆ ಬರುತ್ತಿದ್ದಾಳೆ. ಕಮರ್ಷಿಯಲ್ ಆಡ್ ಗಳಿಂದ ದೂರ ಇದ್ದ ಈ ಚೆಲುವೆ ಮತ್ತೆ ತನ್ನ ಆಕರ್ಷಕ ರೂಪದಿಂದ ಬಂದಿದ್ದಾಳೆ.. ಆಕೆಯ ಅಂದವನ್ನು ಕಂಡು ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ.ಅಷ್ಟೇ ಅಲ್ಲದೆ ಬ್ರಾಂಡ್ ಗೂ ಸಹ ಹೆಸರು ಬಂದಿದೆ. ಇದಕ್ಕಾಗಿ ಆಕೆ ಒಂದು ಕೋಟಿ ರೂಪಾಯಿಗಳಷ್ಟು ಸಂಭಾವನೆ ತೆಗೆದುಕೊಂಡಿದ್ದಾಳೆ ಎನ್ನುವ ಸುದ್ದಿ! 

ವೆಬ್ದುನಿಯಾವನ್ನು ಓದಿ