Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಪುತ್ರಿ ಆರಾಧ್ಯಗೆ ಅನಾರೋಗ್ಯ

ಐಶ್ವರ್ಯಾ ರೈ ಪುತ್ರಿ ಆರಾಧ್ಯಗೆ ಅನಾರೋಗ್ಯ
ಮುಂಬೈ , ಗುರುವಾರ, 4 ಫೆಬ್ರವರಿ 2016 (11:15 IST)
ನೀಲಿ ಕಂಗಳ ಚೆಲುವೆ ಐಶ್ವರ್ಯಾ ರೈ ಫುಲ್ ಟೆನ್ಶನ್ ನಲ್ಲಿದ್ದಾರೆ. ಒಂದು ಕಡೆ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರೆ ಐಶ್ ಮತ್ತೊಂದು ಕಡೆ ಮಗಳ ಅನಾರೋಗ್ಯ ಐಶ್ವರ್ಯಾ ರೈ ಅವರ ನೆಮ್ಮದಿ ಕೆಡಿಸಿದೆಯಂತೆ. ಹಾಗಾಗಿ ಐಶ್ ಮಗಳ ಆರೈಕೆಯಲ್ಲಿ ತೊಡಗಿದ್ದಾರಂತೆ.
 
ಬಚ್ಚನ್ ವಂಶದ ಮುದ್ದಿನ ಕುಡಿ ಆರಾಧ್ಯ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾಳೆ.ಇದರ ನಡುವೆ ಐಶ್ವರ್ಯಾ ಸರ್ಬಿಜಿತ್ ಸಿಂಗ್ ಅವರ ಜೀವನಾಧಾರಿತ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಒಂದು ಕಡೆ ಮಗಳ ಅನಾರೋಗ್ಯ ಮತ್ತೊಂದು ಕಡೆ ಶೂಟಿಂಗ್ ಇವು ಎರಡನ್ನೂ ಮಾನೇಜ್ ಮಾಡೋಕೆ ಐಶ್ ಬೇಬಿ ಪರದಾಡುತ್ತಿದ್ದಾರಂತೆ. ಇನ್ನು ಸಿನಿಮಾದ ಶೂಟಿಂಗ್ ಪಂಜಾಬ್ ನಲ್ಲಿ ನಡೆಯುತ್ತಿದ್ದು ಮಗಳನ್ನು ಅಲ್ಲಿಗೆ ಕರೆದೊಯ್ದಿದ್ದಾರೆ ಐಶ್.
 
ಇನ್ನು ತಮ್ಮ ವಾನಿಟಿ ವ್ಯಾನ್ ನಲ್ಲೇ ಮಗಳ ಆರೈಕೆಯಲ್ಲಿ ತೊಡಗಿದ್ದಾರಂತೆ ಐಶ್ವರ್ಯಾ ರೈ, ನಾಲ್ಕು ವರ್ಷದ ಆರಾಧ್ಯ ಸದ್ಯ ಅಮ್ಮನ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ,ಆರಾಧ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅಂತಾ ನಮ್ಮ ಕಡೆಯಿಂದಲೂ ಹಾರೈಸೋಣ.

Share this Story:

Follow Webdunia kannada