Select Your Language

Notifications

webdunia
webdunia
webdunia
webdunia

ಸುಲ್ತಾನ್ ಸಿನಿಮಾ ತಂಡದ ಮೇಲೆ ದೂರು ದಾಖಲು

ಸುಲ್ತಾನ್ ಸಿನಿಮಾ ತಂಡದ ಮೇಲೆ ದೂರು ದಾಖಲು
, ಮಂಗಳವಾರ, 12 ಜುಲೈ 2016 (08:43 IST)
ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ನಾಲ್ಕೇ ದಿನಗಳಲ್ಲಿ ಸುಲ್ತಾನ್ ಸಿನಿಮಾ ಬರೋಬ್ಬರಿ 142 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಆದ್ರೆ ಸಿನಿಮಾದ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ರೆ ಅತ್ತ ಸುಲ್ತಾನ್ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.

ಹೌದು... ಸಬೀರ್ ಅನ್ಸಾರಿ ಅಕಾ ಸಾಬೀರ್ ಬಾಬಾ ಅನ್ನೋರು ಸುಲ್ತಾನ್ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್, ಸಿನಿಮಾದ ನಾಯಕ ಸಲ್ಮಾನ್ ಖಾನ್, ನಾಯಕಿ ಅನುಷ್ಕಾ ಶೆಟ್ಟಿ ಹಾಗೇ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. 
ಮುಜಾಫರ್ ನಗರದ  ಇಸ್ಲಾಂಪುರ ನಿವಾಸಿಯಾಗಿರುವ ಸಾಬೀರ್ ಬಾಬಾ ಸುಲ್ತಾನ್ ಸಿನಿಮಾದಲ್ಲಿನ ಕಥೆ ನನ್ನ ಜೀವನ ಕುರಿತಾದ ಕಥೆಯಾಗಿದೆ. ಆದ್ರೆ ಸಿನಿಮಾದಲ್ಲಿ ನೈಜವಾದ ಕಥೆ ಬಿಟ್ಟು ಬೇರೆ ಹೇಳಲಾಗಿದೆ. ನನಗೆ ಇದರಿಂದ ಅನ್ಯಾಯವಾಗಿದೆ ಅಂತಾ ಮುಸಾಫರ್ ನಗರ ಸಿಜೆಎಂ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ಬರುವ ಸುಲ್ತಾನ್ ಹಾಗೂ ಆರ್ಫಾ ನಡುವಿನ ಪ್ರೇಮಕಥೆ ನನ್ನ ಜೀವನದ ಪ್ರೇಮಕಥೆಯನ್ನೇ ಹೋಲುತ್ತದೆ ಅಂತಾ ಹೇಳಿದ್ದಾರೆ. ಇನ್ನು ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರು ಸಾಬೀರ್ ಗೆ 20 ಕೋಟಿ ರೂಪಾಯಿಗಳನ್ನು ನೀಡುತ್ತಾರೆ ಅಂತಾ ಹೇಳಲಾಗಿದೆ ಅಂತಾ ಹೇಳಲಾಗುತ್ತಿದೆ.
 
ಇನ್ನು ಸಾಬೀರ್ ಸದ್ಯ ಸಲ್ಲಿಸಿರುವ ದೂರಿನ ವಿಚಾರಣೆ ಇವತ್ತು ನಡೆಯಲಿದ್ದು ತೀರ್ಪು ಏನು ಬರುತ್ತೆ ಅನ್ನೋದನ್ನು ಕಾದು ನೋಡ್ಬೇಕು. ಆದ್ರೆ ಸುಲ್ತಾನ್ ಸಿನಿಮಾ ತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ವಿಚಾರಣೆಯ ನಂತರವಷ್ಟೇ ಸಾಬೀರ್ ಹೇಳಿದ್ದು ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದು ಗೊತ್ತಾಗಲಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ಗೆ ಹಾರಿದ ಇರ್ಮಾನ್ ಸರ್ದಾರಿಯಾ