ಮೊನ್ನೆ ಮೊನ್ನೆ ತಾನೇ ಉಡ್ತಾ ಪಂಜಾಬ್ ಸಿನಿಮಾ ಆನ್ಲೈನ್‌ನಲ್ಲಿ ಲೀಕ್ ಆಗಿ ಭಾರೀ ಸುದ್ದಿಯಾಗಿತ್ತು. ಸಿನಿಮಾ ತಂಡ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಸಹ ನೀಡಿತ್ತು. ಇದೀಗ ರಿಲೀಸ್ ಆಗುವ ಮುನ್ನವೇ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ಈಗಾಗಲೇ ಲೀಕ್ ಆಗಿದೆ.
ಅಂದ್ಹಾಗೆ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾದ ಸೆನ್ಸಾರ್ ಕಾಪಿ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಇನ್ನು ಸಿನಿಮಾ ಲೀಕ್ ಆದ ಸುದ್ದಿ ಗೊತ್ತಾಗುತ್ತಿದ್ದಂತೆ ಸೆನ್ಸಾರ್ ಬೋರ್ಡ್ ಕ್ರಮ ಕೈಗೊಂಡಿದೆ.ಅಷ್ಟರಲ್ಲೇ ಸಿನಿಮಾದ ಲಿಂಕ್‌ನ್ನು ತೆಗೆದು ಹಾಕಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪೆಹ್ಲಜಾ ನಿಹಾಲನಿ ನಮಗೆ ಸಿನಿಮಾದ ಸೆನ್ಸಾರ್ ಕಾಪಿ ಲೀಕ್ ಆಗಿರುವ ಬಗ್ಗೆ ದೂರು ಬಂದಿದೆ. ಸೆನ್ಸಾರ್ ಕಾಪಿ ನಿರ್ಮಾಪಕರು ಮಾಡಿರುವಂತಹದ್ದು. ಹಾಗಾಗಿ ಸಿನಿಮಾದ ಡಿವಿಡಿ ಲೀಕ್ ಆಗಿದೆ. ಅದೇ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ ಅಂತಾ ಅವರು ಹೇಳಿದ್ದಾರೆ.
ಇನ್ನು ಸುಲ್ತಾನ್ ಸಿನಿಮಾ ಕೂಡ ಇದೇ ರೀತಿ ಸೋರಿಕೆಯಾಗಿದೆ ಅಂತಾ ಸುದ್ದಿಯಾಗಿತ್ತು. ಹೀಗೆ ಒಂದರ ಹಿಂದೆ ಒಂದು ಸಿನಿಮಾಗಳು ರಿಲೀಸ್‌ಗೂ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿರೋದನ್ನು ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಸಿನಿಮಾ ರಿಲೀಸ್ ಮಾಡುವ ಸಿನಿಮಾ ತಂಡಗಳು ಭಯದಲ್ಲೇ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವಂತಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.