Select Your Language

Notifications

webdunia
webdunia
webdunia
webdunia

ಮೋದಿ ಕ್ಷಮಾಪಣೆ ಕೇಳುವ ಅಗತ್ಯವಿಲ್ಲ ಅಂದ್ರು ಸಲ್ಮಾನ್ ಖಾನ್

ಸಲ್ಮಾನ್ ಖಾನ್
, ಬುಧವಾರ, 22 ಜನವರಿ 2014 (09:17 IST)
PR
ಸಲ್ಮಾನ್ ಖಾನ್ ಮೋದಿ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ. ಕೆಲವು ದಿನಗಳ ಹಿಂದೆ ಮೋದಿ ಅವರನ್ನು ಭೇಟಿ ?ಆದ ಬಳಿಕ ಅವರು ಮೋದಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದೇ ಆಡಿದ್ದು !

2002 ರಲ್ಲಿ ಗುಜರಾತ್ ನಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಆದ ಅನಾಹುತಗಳಿಗೆ ಸಂಬಂಧಪಟ್ಟಂತೆ ನರೇಂದ್ರ ಮೋದಿ ಅವರು ಕ್ಷಮಾಪಣೆ ಕೇಳುವ ಅಗತ್ಯ ಇಲ್ಲವೆಂದು ನಟ ಸಲ್ಮಾನ್ ಖಾನ್ ಒಂದು ಪ್ರೈವೇಟ್ ಟೆಲಿವಿಷನ್ ನಲ್ಲಿ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ವೇಳೆ ಆತನಿಗೆ ಕೋಮುಗಲಭೆ ಸಂಬಂಧ ಪಟ್ಟಂತೆ ಅವರು ಭಾಗಿ ಆಗಿದ್ದಿದ್ದರೆ ಮೋಡಿಗೆ ಕೋರ್ಟ್ ನಿಂದ ಕ್ಲೀನ್ ಚಿಟ್ ಸಿಗುತ್ತಿರಲಿಲ್ಲಎನ್ನುವ ಮಾತು ಸಹ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ನನ್ನ ಚಿತ್ರ ಜೈ ಹೊ ಪ್ರಮೋಟ್ ಮಾಡೋಕೆ ಗುಜರಾಜ್ ಗೆ ಹೋಗಿದ್ದು ವಿನಹಃ ಮೋದಿಯನ್ನು ಪ್ರಮೋಟ್ ಮಾಡೋಕೆ ಅಲ್ಲ ಎಂದು ಸಹ ಈ ಸಮಯದಲ್ಲಿ ಸ್ಪಷ್ಟ ಪಡಿಸಿದರು ಸಲ್ಮಾನ್. ಮೋದಿ ಸಂಸ್ಕಾರ ಹೊಂದಿರುವ ವ್ಯಕ್ತಿ. ಆತನ ಜೊತೆ ಆದ ಭೇಟಿ ಅತ್ಯದ್ಭುತ ಎಂದು ಹಾಡಿ ಹೊಗಳಿದ್ದಾರೆ ಸಲ್ಮಾನ್. ತನ್ನ ರಾಜ್ಯದಲ್ಲಿ ಮೋದಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಮಾಡಿರುವ ಕೆಲಸಗಳು ನನ್ನನ್ನು ಆಕರ್ಶಿಸಿದೆ ಎಂದೂ ಸಹ ಈ ಸಮಯದಲ್ಲಿ ತಿಳಿಸಿದ್ದಾರೆ ಸಲ್ಮಾನ್ ಭಾಯ್ !

Share this Story:

Follow Webdunia kannada