Select Your Language

Notifications

webdunia
webdunia
webdunia
webdunia

ಅಮಿ ಜಾಕ್ಸನ್ ಗೆ ಎವಡು ಸಕ್ಸಸ್ ನಿಂದ ತುಂಬಾ ಖುಷಿ ಆಗಿದೆಯಂತೆ...ಆಕೆಗೆ ಅಷ್ಟು ಖುಷಿ ಆಗಲು ಕಾರಣ ?

ಮದರಾಸುಪಟ್ಟಣಂ
, ಬುಧವಾರ, 22 ಜನವರಿ 2014 (09:28 IST)
PR
ಮದರಾಸು ಪಟ್ಟಣಂ ಆನ್ನುವ ತಮಿಳು ಚಿತ್ರದ ಮುಖಾಂತರ ನಾಯಕಿಯಾಗಿ ಪರಿಚಿತಳಾದ ನಟಿ ಅಮಿ ಜಾಕ್ಸನ್. ಸೌಂದರ್ಯ ಮತ್ತು ಅಭಿನಯ ಎರಡರ ಮುಖಾಂತರ ತನ್ನನ್ನು ಗುರುತಿಸಿಕೊಂಡ ಈ ಮುಂಬೈ ಚೆಲುವೆ ಕಾಲಿವುಡ್ ನಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ದೊರೆಯದೆ ಹೋದ ಕಾರಣ ತೆಲುಗು ಇಂಡಸ್ಟ್ರಿ ಕಡೆ ತನ್ನ ಗಮನ ನೆಟ್ಟಳು. ರಾಮ್ ಚರಣ್ ನಟನೆಯ ಎವಡು ಚಿತ್ರದಲಿ ನಟಿಸುವ ಅವಕಾಶ ದೊರೆಕಿತು.

ಈ ಚಿತ್ರವೂ ಯಶಸ್ವಿ ಆದ ಕಾರಣ ಅತಿ ಹೆಚ್ಚು ಖುಷಿ ಪಡ್ತಾ ಇದ್ದಾಳೆ ಅಮಿ .ಡ್ಯಾನ್ಸ್ ಜೊತೆ ಹಾಡಿಗೂ ಆದ್ಯತೆ ಇರುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈಗ ಬರುತ್ತಿರುವ ಕಥೆಗಳಲ್ಲಿ ನಾಯಕಿಯರ ಪಾತ್ರ ತುಂಬಾ ಕಡಿಮೆ ಇರುತ್ತದೆ. ಆದರೆ ನಿರ್ದೇಶಕ ವಂಶಿಪೈಡಿಪಲ್ಲಿ ನನ್ನ ಪಾತ್ರಕ್ಕೆ ಆದ್ಯತೆ ನೀಡಿದ್ದಾರೆ. ಸ್ಟಾರ್ ಇಮೇಜ್ ಇರುವ ನಾಯಕನ ಜೊತೆ ಮೊದಲ ಬಾರಿ ಅಂಟಿಸುವ ಅವಕಾಶ ನನಗೆ ಸಿಕ್ಕಿರುವುದು ಸಾಮಾನ್ಯ ಸಂಗತಿ ಅಲ್ಲ ಎನ್ನುವ ಖುಷಿ ಅಮಿಯದ್ದಾಗಿದೆ.

ತೆಲುಗು ಮಾತ್ರವಲ್ಲ ಉತ್ತರ ಭಾರತದಲ್ಲೂ ಸಹ ರಾಮ್ ಚರಣ್ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಆತನ ಜೊತೆ ನಟಿಸುವುದರಿಂದ ಪ್ರೇಕ್ಷಕರು ಬೇಗನೆ ನನ್ನನ್ನು ಗುರುತಿಸುತ್ತಾರೆ. ಕಮರ್ಷಿಯಲ್ ಕಥೆಯನ್ನು ಹೊಂದಿರುವ ಚಿತ್ರಗಳು ತೆಲುಗಿನಲ್ಲಿ ಉತ್ತಮ ಯಶಸ್ಸು ನೀಡುತ್ತಿದೆ. ನಟನೆಯಲ್ಲಿ ಹೆಚ್ಚು ಯಶಸ್ವಿ ಆಗಲು ನಾನು ಅದಕ್ಕೆ ಪೂರಕ ಅಭ್ಯಾಸ ಮಾಡಲೇ ಬೇಕು . ಆಗಷ್ಟೇ ನನಗೆ ಹೆಚ್ಚು ಜನಪ್ರಿಯತೆ ಸಿಗುವುದು. ಈ ಗೆಲುವು ನನ್ನ ಕೆರಿಯರ್ ಬಗ್ಗೆ ಆತ್ಮವಿಶ್ವಾಸ ಉಂಟು ಮಾಡಿದೆ ಎಂದು ಎಲ್ಲರಮುನ್ದೆ ಖುಷಿಯಿಂದ ಹೇಳಿಕೊಂಡಿದ್ದಾಳೆ ಅಮಿ !

Share this Story:

Follow Webdunia kannada