ಅಕ್ಕಿನೇನಿ ನಾಗೇಶ್ವರ ರಾವ್ ಡಿಟೆಕ್ಟಿವ್ ಆಗಿದ್ದ ಕಥೆ ಇಲ್ಲಿದೆ!
, ಗುರುವಾರ, 23 ಜನವರಿ 2014 (09:41 IST)
ಎನ್ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ್ ರಾವ್ ನಟಿಸಿದ್ದ ಚಿತ್ರ ಮಿಸ್ಸಮ್ಮ ಹೆಚ್ಚು ಜನಪ್ರಿಯವಾಯಿತು. ಅ ಚಿತ್ರದಲ್ಲಿ ಅಕ್ಕಿನೇನಿ ಒಬ್ಬ ಪತ್ತೆದಾರನಾಗಿ ಪಾತ್ರ ನಿರ್ವಹಿಸಿದ್ದರು. ಆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಪಡೆದಿದ್ದ ಆ ನಟ ಅತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಇಡಿ ಚಿತ್ರರಂಗ ಅವರತ್ತ ನೋಡುವಂತೆ ಮಾಡಿದ್ದಾರು. ಇವರು ಹೀಗ್ಯಾಕೆ ಮಾಡಿದರು ಎನ್ನುವ ಬಗ್ಗೆ ಯೋಚನೆ ಬರುವುದು ಸಹಜ. ಒಮ್ಮೆ ಅಕ್ಕಿನೇನಿ ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಹೇಳಿದ್ದರು.. ಅಕ್ಕಿನೇನಿ ಆ ಪಾತ್ರವನ್ನು ತಾವೇ ಕೇಳಿ ಮಾಡಿದ್ದರು. ಆವರೆಗೂ ಯಾರ ಬಳಿಯೂ ಪಾತ್ರಗಳನ್ನೂ ಕೇಳಿ ಮಾಡದೆ ಇದ್ದ ಈ ನಟ ಈ ರೀತಿ ಮಾಡಲು ಕಾರಣಗಳಿವೆ. ಮುಖ್ಯವಾಗಿ ಅವರು ಅದಾಗಲೇ ದೇವದಾಸ್ ಚಿತ್ರದ ಮುಖಾಂತರ ಟ್ರಾಜಿಡಿ ಕಿಂಗ್ ಆಗಿದ್ದರು.ತಮಗೆ ಆ ಹೆಸರು ಶಾಶ್ವತವಾಗಿ ನಿಂತು ಬಿಡ ಬಾರದು ಎಂದು ಅಕ್ಕಿನೇನಿ ಈ ಪಾತ್ರವನ್ನು ಮಾಡಿದ್ದರಂತೆ. ಹಣಕ್ಕೆ ಆಸೆ ಬಿದ್ದು ತಾನು ಇಂತಹ ಪಾತ್ರ ಮಾಡಿದೆ ಎಂದು ಅನೇಕರು ತಮಾಷೆ ಮಾಡಿದರು. ಆದರೆ ನಿಜಕ್ಕೂ ನಡೆದ ಸಂಗತಿ ಇದೆ ಆಗಿತ್ತು ಎನ್ನುವ ಸತ್ಯ ಬಿಚ್ಚಿಟ್ಟಿದ್ದರು ಆ ಸಂದರ್ಶನದಲ್ಲಿ ಅಕ್ಕಿನೇನಿ . ಸತ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ ಆ ಮಹಾನ್ ಚೇತನ ಅವರ ಅಪಾರ ಅಭಿಮಾನಿಗಳನ್ನು ಮತ್ತು ಶಿಷ್ಯರನ್ನು ಬಿಟ್ಟು ಮುಂದೆ ಸಾಗಿದ್ದಾರೆ, ಅವರ ಆತ್ಮಕ್ಕೆ ಶಾಂತಿ ದೊರಕಲಿ !