Select Your Language

Notifications

webdunia
webdunia
webdunia
webdunia

ಬಿಗ್ ಬಾಸ್-8 ಕಲರ್ ವಾಹಿನಿಯಿಂದ ಲೈಫ್ ಓಕೆಯತ್ತ?

ಬಿಗ್ ಬಾಸ್8
, ಶನಿವಾರ, 25 ಜನವರಿ 2014 (09:28 IST)
PR
ಟೀವಿ ಪ್ರಪಂಚದ ಬಹು ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ . ಅದು ಹೆಚ್ಹು ಜನರನ್ನು ಪ್ರೀತಿಯೀನ್ದ, ಕಿರಿಕಿರಿಯಿಂದ ನೋಡುವಂತೆ ಮಾಡಿತ್ತು. ನಾವು ಅಂತಹ ಕಾರ್ಯಕ್ರಮಗಳ ಕಡೆಗೆ ಕಣ್ಣೆತ್ತಿಯೂ ನೋಡಲ್ಲ ಎನ್ನುವವರು ಸಹ ಅದರ ಬಗ್ಗೆ ಕುತೂಹಲದಿಂದ ವೀಕ್ಷಿಸುವ ಬಗ್ಗೆ ಎಲ್ಲರಿಗು ಗೊತ್ತೇ ಇದೆ. ಇಷ್ಟು ದಿನಗಳ ಕಾಲ ಈ ರಿಯಾಲಿಟಿ ಷೋ ಕಲರ್ ವಾಹಿನಿಯಲ್ಲಿ ಬರುತ್ತಿತ್ತು. ಅದರ ಹೆಚ್ಚಿನ ಸೀಸನ್ ಗಳನ್ನೂ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೇ ನಡೆಸಿಕೊಡುತ್ತಿದ್ದುದು. ಆದರೆ. ಈ ಬಾರಿ ಅವರು ಆ ಕಾರ್ಯಕ್ರಮ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಜಾಗಕ್ಕೆ ರಣಬೀರ್ ಕಪೂರ್ ಬರುವ ಸಾಧ್ಯತೆ ಇದೆ. ಅದೇರೀತಿ ಈ ರಿಯಾಲಿಟಿ ಷೋ ಈಗ ಕಲರ್ ವಾಹಿನಿಯಿಂದ ಲೈಫ್ ಓಕೆ ವಾಹಿನಿಯತ್ತ ಹೋಗುವ ಸಂಭವ ಹೆಚ್ಚಾಗಿದೆ.

ಈಗಾಲೇ ಒಟ್ಟು ಏಳು ಆವೃತ್ತಿಯನ್ನು ಕಂಡಿದೆ ಬಿಗ್ ಬಾಸ್ ಅದರಲ್ಲಿ ನಾಲ್ಕಕ್ಕೆ ಸಲ್ಮಾನ್ ಖಾನ್ ನಿರೂಪಕರಾಗಿದ್ದರು. ಕಳೆದ ಬಾರಿ ನಡೆದ ಶೋನ ಬಗ್ಗೆ ತುಂಬಾ ಅಸಹನೆ ವ್ಯಕ್ತ ಪಡಿಸಿದ್ದ ಸಲ್ಮಾನ್ ಇನ್ನುಮುಂದೆ ಈ ರಿಯಾಲಿಟಿ ಷೋಗೆ ನಾನು ಕೆಲಸ ಮಾಡಲ್ಲ ಎಂದು ಟ್ವೀಟ್ ಮಾಡಿದ್ದರು. ಅದರಂತೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ತುಂಬಾ ಕಡಿಮೆ ಇದೆ. ಆರಂಭಿಕ ಕಾರ್ಯಕ್ರಮದಲ್ಲಿ ಅರ್ಶದ್ ವಾರ್ಸಿ ಪ್ರಸೆಂಟರ್ ಆಗಿದ್ದರು. ಆ ಬಳಿಕ ಶಿಲ್ಪಾ
ಶೆಟ್ಟಿ ಆ ಜಾಗಕ್ಕೆ ಬಂದಿದ್ದರು.

ಬಿಗ್ ಬಾಸ್ - 7 ರಲ್ಲಿ ಗೌಹರ್ ಖಾನ್ ಅಂತಿಮ ಸುತ್ತಿನಲ್ಲಿ ಗೆದ್ದಿದ್ದರು. ಆದರೆ ಎಂಡಮೋಲ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ದೀಪಕ್ ಧಾರ್ ಇ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಬಾರಿಯೂ ಕಲರ್ ವಾಹಿನಿಯಲ್ಲೇ ಬಿಗ್ ಬಾಸ್ ನಡೆಯುತ್ತದೆ ಎಂದು ಹೇಳಿದ್ದಾರೆ.

Share this Story:

Follow Webdunia kannada