Select Your Language

Notifications

webdunia
webdunia
webdunia
webdunia

ಕಾರಿನಲ್ಲಿ ಕುಳಿತು ದೀಪಿಕಾ ಪಡುಕೋಣೆ ಮಾತನಾಡಿದ್ದು ಯಾರ ಜೊತೆ?

ದೀಪಿಕಾ ಪಡುಕೋಣೆ
, ಬುಧವಾರ, 22 ಜನವರಿ 2014 (09:20 IST)
PR
ಬಾಲಿವುಡ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಯಾವ ರೀತಿ ಗೆಲುವನ್ನು ಸಾಧಿಸುತ್ತಿದ್ದಲೊ ಅದೇ ರೀತಿ ಆಕೆ ಅನೇಕ ವಿಷಯಗಳಿಂದ ಹೆಚ್ಚು ಜನರ ಗಮನ ಸೆಳೆಯುತ್ತಿದ್ದಾಳೆ.

ಬಾಲಿವುಡ್ ನ ಯಶಸ್ವಿ ನಟಿ ದೀಪಿಕಾ ಪಡುಕೋಣೆ. ಆಕೆಯ ಎಲ್ಲ ಚಿತ್ರಗಳು ನೂರು ಕೋಟಿ ಕ್ಲಬ್ ಮುಟ್ಟಿದ್ದು ಕಳೆದ ವರ್ಷ. ಈ ವರ್ಷವೂ ಸಹ ಆಕೆಗೆ ಕೈತುಂಬಾ ಕೆಲಸ ಇದೆ. ದೀಪಿಕಾಳ ಹೊಸ ವಿಷಯ ಏನೆಂದರೆ ಆಕೆಗೆ ಪ್ರೀತಿಯು ಮಾಡೋಕೆ ಸಾಧ್ಯ ಆಗುವುದಿಲ್ಲ.

ಅಂದರೆ, ಆಕೆ ಸದಾ ತನ್ನ ಬಾಯ್ ಫ್ರೆಂಡ್ಸ್ ನ್ನು ಬದಲಾಯಿಸುತ್ತಾ ಇರುತ್ತಾಳೆ. ಆದ್ದರಿಂದ ಆಕೆಯು ಸಿಮ್ ಕಾರ್ಡ್ ನಷ್ಟೇ ಸುಲಭವಾಗಿ ಬಾಯ್ ಫ್ರೆಂಡ್ಸ್ ನ್ನು ಬದಲಾಯಿಸುತ್ತಾಳೆ ಎನ್ನುವ ಮಾತಿದೆ. ಇತ್ತೀಚೆಗಷ್ಟೇ ರಣವೀರ್ ಸಿಂಗ್ ಜೊತೆ ಪ್ರೇಮದಾಟ ಆಡಿದ್ದ ದೀಪಿಕ ಪಡುಕೋಣೆ ಈ ತಿಂಗಳಲ್ಲಿ ಆದ ಆಕೆಯ ಜನ್ಮ ದಿನದ ಬಳಿಕ ಆತನ ಸ್ನೇಹಕ್ಕೆ ಬಾಯಿ ಹೇಳಿದಳು. ಹೀಗಂತ ನಾವು ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು. ಆದರೆ ಈಗ ಅದಕ್ಕೆ ಹೊಂದುವ ಮತ್ತೊಂದು ಸಂಗತಿ ಹೊರಬಂದಿದೆ. ಆಕೆ ರಣವೀರ್ ಸಿಂಗ್ ಜೊತೆ ಸುಮಾರು ಒಂದು ಗಂಟೆಗಳ ಕಾಲ ಕಾರಿನಲ್ಲಿ ಕುಳಿತು ಮಾತನಾಡಿದಳಂತೆ. ಅದನ್ನು ಆ ಯೂನಿಟ್ ನ ಮಂದಿ ಸ್ಪಷ್ಟಪಡಿಸಿದ್ದಾರೆ . ಅಂದ್ರೆ ರಣವೀರ್ ಜೊತೆಗಿನ ಪ್ರೇಮ ಮುರಿದಿಲ್ಲ ಅಂತಾಯಿತು. ಆದರೆ ಒಮ್ಮೆ ಹೊಗೆ ಕಂಡ ಬಳಿಕ ಬೆಂಕಿ ಹತ್ತಿ ಉರಿಯೋಕೆ ಹೆಚ್ಚು ಸಮಯ ಬೇಕಿಲ್ಲ!

Share this Story:

Follow Webdunia kannada